ನೀವು ಗರ್ಭಿಣಿ ಮಹಿಳೆ ಮತ್ತು ಕುಟುಂಬದವರಿಗೆ ಆರೋಗ್ಯ ಸಂಸ್ಥೆಗಳಲ್ಲಿ ಹೆರಿಗೆ ಮಾಡಿಸುವುದರ ಬಗ್ಗೆ ಸಲಹೆ ನೀಡಬೇಕು. ಒಂದು ವೇಳಸ ಆರೋಗ್ಯ ಸಂಸ್ಥೆಗಳಲ್ಲಿ ಹೆರಿಗೆ ಮಾಡಿಸುವುದಕ್ಕೆ ಸಾಧ್ಯವಾಗದಿದ್ದರೆ ಮನೆಯಲ್ಲಿ ಆರೈಕೆಯನ್ನು ಈ ಕೆಳಕಂಡಂತೆ ಕೊಡಬೇಕು.
ತರಬೇತಿ ಹೊಂದಿರುವ ದಾದಿಯರಿಂದ ಹೆರಿಗೆ ಮಾಡಿಸಿಕೊಳ್ಳಬೇಕು ಎಂದು ಮಹಿಳೆಗೆ ಸಲಹೆ ನೀಡಿ.
ಮಗುವನ್ನು ಬೆಚ್ಚಗಿಡುವಂತೆ ತಾಯಿಗೆ ಸಲಹೆ ನೀಡಬೇಕು. ಶಿಶುವನ್ನು ಜೋರಾಗಿ ಒರಸುವುದರಿಂದ ಶರೀರದ ಶಾಖ ನಷ್ಟವಾಗುವುದಕ್ಕೆ ಅವಕಾಶವಾಗುತ್ತದೆ. ಆದುದರಿಂದ ಶಿಶುವನ್ನು ಜೋರಾಗಿ ಒರಸಬಾರದು ಎಂದು ಸಲಹೆ ನೀಡಬೇಕು.
ಹಗಲು ಮತ್ತು ರಾತ್ರಿಯ ಅವಧಿಯಲ್ಲಿ ತಾಯಿ ಮತ್ತು ಮಗುವಿನ ಮಧ್ಯೆ ತುಂಬ ಹತಿರದ ಸಂಪರ್ಕವಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. (ಚರ್ಮದಿಂದ ಚರ್ಮದ ಸಂಪರ್ಕ). ತಾಯಿ ದೊರೆಯದಿದ್ದರೆ, ತಂದೆ ಅಥವಾ ಕುಟುಂಬದ ಇತರೆ ವಯಸ್ಕರು ಈ ರೀತಿಯ ಸಂಪರ್ಕ ನೀಡಬಹುದು.
ಹುಟ್ಟಿದ ಮಗುವಿಗೆ ಈ ರೀತಿಯ ಆರೈಕೆ ಅಗತ್ಯವೆಂದು ಗುರ್ತಿಸುವುದು ಮುಖ್ಯವಾಗಿರುತ್ತದೆ (ಹೆಣ್ಣು ಮಗು ಮತ್ತು ಗಂಡು ಮತು ಇಬ್ಬರಿಗೂ)
ಮತು ಜನನದ ಬಗ್ಗೆ ನಿಮ್ಮ ಗ್ರಾಮದ ಲೆಕ್ಕಾಧಿಕಾರಿಗಳಲ್ಲಿ ಪೋಷಕರು ನೋಂದಾಯಿಸಲು ಸಹಾಯ ನೀಡಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 7/24/2019
ಈ ದಿನಗಳಲ್ಲಿ ನಾರ್ಮಲ್ ಡೆಲಿವರಿ ತುಂಬಾ ಅಪರೂಪವಾಗುತ್ತದೆ. ...
ಗರ್ಭಿಣಿ ಮಹಿಳೆ ಹಾಗೂ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕ ಆಹ...
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...