অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಣ/ಶುಲ್ಕಗಳು

ಹಣ/ಶುಲ್ಕಗಳು

ನಾನು ಒಂದು ದೂರು ಸಲ್ಲಿಸಲು ಹಣ/ಶುಲ್ಕಗಳನ್ನು ಪಾವತಿಸ ಬೇಕೇ?

  • ಕೇಂದ್ರ ಮಾಹಿತಿ ಆಯೋಗವು ದೂರು ನೀಡಲು ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ಕೆಲವು ರಾಜ್ಯ ಮಾಹಿತಿ ಆಯೋಗ ಈ ಉದ್ದೇಶಕ್ಕೆ ಶುಲ್ಕಗಳನ್ನು ವಿಧಿಸುತ್ತವೆ.
  • ದೂರು ದಾಖಲಿಸಲು ಯಾವುದೇ ಕಾಲ ಪರಿಮಿತಿ ಇಲ್ಲ, ಆದರೆ ಸಂಭವಿಸಿದ ನಂತರ ಸಮಂಜಸ ಅವಧಿಯ ಒಳಗೆ ದಾಖಲಿಸುವುದು ಸೂಕ್ತ.

ನಾನು ದಾಖಲಿಸಿದ ದೂರಿಗೆ ಹೇಗೆ ಪ್ರತಿಕ್ರಿಯೆ ಪಡೆಯುವುದು?

  • ಸಾರ್ವಜನಿಕ ಮಾಹಿತಿ ಅಧಿಕಾರಿ/ ಪ್ರಥಮ ಮೇಲ್ಮನವಿ ಪ್ರಾಧಿಕಾರವು ಕೇಂದ್ರ ಮಾಹಿತಿ ಆಯೋಗ/ರಾಜ್ಯ ಮಾಹಿತಿ ಆಯೋಗದಲ್ಲಿ ವಿಚಾರಣೆಗೆ ಮುನ್ನವೇ ನಿಮ್ಮ ಸಮಸ್ಯೆಯನ್ನು ಪರಿಹರಿಸುವರು.
  • ಹಾಜರಾಗಲು ಆದೇಶಿಸುವುದು, ಹಾಜರಿಯನ್ನು ಕಡ್ಡಾಯಗೊಳಿಸುವುದು, ಪ್ರಮಾಣ ವಚನದಲ್ಲಿ ಸಾಕ್ಷಿಯನ್ನು ನೀಡುವುದು, ದಾಖಲೆಗಳನ್ನು ಹಾಜರುಪಡಿಸುವುದು, ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಆಯೋಗಗಳು ಸಿಮಿಲ್ ನ್ಯಾಯಾಲಯಗಳ ಅಧಿಕಾರಗಳನ್ನು ಹೊಂದಿದೆ.
  • ಸಾರ್ವಜನಿಕ ಮಾಹಿತಿ ಅಧಿಕಾರಿ/ಪ್ರಥಮ ಮೇಲ್ಮನವಿ ಪ್ರಾಧಿಕಾರಗಳಲ್ಲಿ ಮನವಿಗಳು/ದೂರುಗಳು ಅಧಿಕ ಪ್ರಮಾಣದಲ್ಲಿವೆ. ಮತ್ತು ಅಲ್ಲಿ ತೀರ್ಮಾನವಾಗಿಲ್ಲದ ದೂರುಗಳು ದೊಡ್ಡ ಸಂಖ್ಯೆಯಲ್ಲಿವೆ. ಆದ್ದರಿಂದ ದೂರುಗಳ ವಿಚಾರಣೆಗೆ ಬರಲು 12 ರಿಂದ 36 ತಿಂಗಳುಗಳಾಗ ಬಹುದು.

ಬೇರೆ ಬೇರೆ ರಾಜ್ಯಗಳಲ್ಲಿ ಅರ್ಜಿ ಪ್ರಕ್ರಿಯೆಗೆ ಪ್ರತ್ಯೇಕ ನಿಯಮಗಳು ಮತ್ತು ಶುಲ್ಕಗಳಿವೆಯೇ?

  1. ಕೇಂದ್ರ, ರಾಜ್ಯಗಳು, ಶಾಸಕಾಂಗಗಳು ಮತ್ತು ಸರ್ವೋಚ್ಛ/ಉಚ್ಛ ನ್ಯಾಯಾಲಯಗಳಡಿಯಲ್ಲಿನ ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕಿಗೆ ಪ್ರತ್ಯೇಕವಾದ ನಿಯಮಗಳನ್ನು ರಚಿಸಿವೆ.
  2. ಶುಲ್ಕದ ಮೊತ್ತ ಮತ್ತು ಪಾವತಿಸುವ ವಿಧಾನ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಿರುತ್ತದೆ ಮತ್ತು ನೀವು ನಿಮಗೆ ಅನ್ವಯವಾಗುವ ಸರಿಯಾದ ನಿಯಮಗಳನ್ನು ಪರಿಕ್ಷೀಸಬೇಕು.
    • ಒಬ್ಬ ವ್ಯಕ್ತಿಯು ಆತನ/ಅವಳ ಅರ್ಜಿ ಶುಲ್ಕವನ್ನು ಈ ಮೂಲಕ ಪಾವತಿಸಲು ಸಾಧ್ಯ:
  3. ವೈಯಕ್ತಿಕವಾಗಿ ಹಣವನ್ನು ಪಾವತಿಸುವುದು [ನಿಮ್ಮ ರಸೀದಿಯನ್ನು ತೆಗೆದು ಕೊಳ್ಳಲು ನೆನೆಪಿಡಿ
  4. ಅಂಚೆ ಮೂಲಕ:
    • ಡಿಮ್ಯಾಂಡ್ ಡ್ರಾಫ್ಟ್/ಬ್ಯಾಂಕರ್ಸ್ ಚೆಕ್
    • ಭಾರತೀಯ ಅಂಚೆ ಪದ್ದತಿ
    • ಮನಿ ಆರ್ಡರ್ (ಕೆಲವು ರಾಜ್ಯಗಳಲ್ಲಿ ಮಾತ್ರ)
    • ಕೋರ್ಟ್ ಫೀ ಸ್ಟಾಂಪ್ ಲಗತ್ತಿಸಿ (ಕೆಲವು ರಾಜ್ಯಗಳಲ್ಲಿ ಮಾತ್ರ)
  5. ಕೆಲವು ರಾಜ್ಯ ಸರ್ಕಾರಗಳು ಕೆಲವು ಖಾತೆಯನ್ನು ನಿಗದಿ ಪಡಿಸಿವೆ. ನೀವು ಆ ಖಾತೆಗೆ ಹಣ ಪಾವತಿಸ ಬೇಕಾಗುತ್ತದೆ. ಇದಕ್ಕಾಗಿ-
    • ನೀವು SBIನ ಯಾವುದೇ ಶಾಖೆ ಹೋಗಿ ಮತ್ತು ಆ ಶಾಖೆಯಲ್ಲಿ ಹಣ ಪಾವತಿಸಿ ಮತ್ತು ನಿಮ್ಮ
    • ಮಾಹಿತಿಗಾಗಿ ಹಕ್ಕಿನ ಅರ್ಜಿಯ ಜೊತೆ ಹಣ ಪಾವತಿಸಿದ ರಸೀದಿಯನ್ನಿ ಲಗತ್ತಿಸಿ-
    • ಅಥವಾ-
    • ನೀವು ಪೋಸ್ಟಲ್ ಆರ್ಡರ್‌ನ್ನು ಸಹ ಕಳಿಸಲು ಸಾಧ್ಯ ಅಥವಾ ಆ ಖಾತೆಯ ಪರವಾಗಿ ಒಂದು ಡಿಡಿ ತೆಗೆದು ನಿಮ್ಮ ಮಾಹಿತಿಗಾಗಿ ಹಕ್ಕಿನ ಅರ್ಜಿಯ ಜೊತೆ ಕಳುಹಿಸಲು ಸಾಧ್ಯ.
  6. BC/DD/IPO "ಅಕೌಂಟ್ಸ್ ಅಫೀಸರ್" ಪರವಾಗಿ ಸಾಧ್ಯ ಎಂದು DOPT ಇತ್ತಿಚೇಗೆ ಕೇಂದ್ರ ಮಾಹಿತಿ ಹಕ್ಕು ನಿಯಮಗಳಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳಿಗೆ ಸ್ಪಷ್ಟಪಡಿಸಿದೆ.

ಮಾಹಿತಿ ಹಕ್ಕಿನಡಿಯಲ್ಲಿ ಮೊದಲ ಮೇಲ್ಮನವಿಯನ್ನು ಹೇಗೆ ದಾಖಲು ಮಾಡುವುದು?

ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 1ನೇ ಮೇಲ್ಮನವಿ ದಾಖಲಿಸುವಾಗ ದಯವಿಟ್ಟು ಕೆಳಗಿನ ಸೂಚನೆಗಳನ್ನು ಪಾಲಿಸಿ:

  • ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ತೀರ್ಪು ನೀಡಿದ ದಿನಾಂಕದಿಂದ 30 ದಿನಗಳ ಒಳಗೆ ಮೊದಲ ಮೇಲ್ಮನವಿಯನ್ನು ಅರ್ಜಿದಾರನು ಪ್ರಥಮ ಮೇಲ್ಮನವಿ ಪ್ರಾಧಿಕಾರದ (FAA) ಜೊತೆ ದಾಖಲಿಸಬೇಕು
  • 30 ದಿನಗಳ ಒಳಗೆ ಯಾವುದೇ ಉತ್ತರ ದೊರೆಯದಿದ್ದಲ್ಲಿ, (ಅರ್ಜಿಯನ್ನು ಸಹಾಯಕ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯಲ್ಲಿ ದಾಖಲಿಸಿದ್ದಲ್ಲಿ 35 ದಿನಗಳು), ನಂತರ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಪ್ರತಿಕ್ರಿಯೆಯ ಬಾಕಿಯಾದ ದಿನಾಂಕದಿಂದ 30 ದಿನಗಳ ಒಳಗೆ ಮೊದಲ ಮೇಲ್ಮನವಿಯನ್ನು ದಾಖಲಿಸ ಬೇಕು.
  • ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ತೀರ್ಪಿನ ಪತ್ರದಿಂದ ಮೊದಲ ಮೇಲ್ಮನವಿ ಪ್ರಾಧಿಕಾರದ ಹೆಸರು, ಅಧಿಕಾರ ಮತ್ತು ವಿಳಾಸವನ್ನು ಕಂಡು ಕೊಳ್ಳಿ.
  • ಪ್ರತಿಕ್ರಿಯೆ ಬರದಿದ್ದಲ್ಲಿ, ಸರ್ಕಾರದ ಇಲಾಖೆ/ಕಚೇರಿ/ ಉದ್ಯಮಗಳ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಮತ್ತು ವಿವರಿಗಳಿಗಾಗಿ ಮಾಹಿತಿ ಹಕ್ಕು ಲಾಂಛನವನ್ನು ಕುರಿತು ಕೇಳಿ.
  • ಮೇಲಿನ ಪ್ರಯತ್ನಗಳ ಹೊರತು, ನೀವು ಮೊದಲ ಮೇಲ್ಮನವಿ ಪ್ರಾಧಿಕಾರದ ವಿವರಗಳನ್ನು ಗುರುತಿಸಲು ಸಾಧ್ಯವಾಗದಿದ್ದರೆ, ನಿಮ್ಮ ಪ್ರಥಮ ಮೇಲ್ಮನವಿಯನ್ನು ಕೆಳಗಿನಂತೆ ಸಂಬೋದಿಸಿ:

ಮಾಹಿತಿ ಹಕ್ಕು ಕಾಯಿದೆ 2005ರ ಅಡಿಯಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರ

C/O ಇಲಾಖೆ/ಕಚೇರಿಯ _______________ ಮುಖ್ಯಸ್ಥರು

(ಮುಖ್ಯ ಮಾಹಿತಿ ಅಧಿಕಾರಿಯ ಇಲಾಖೆ/ಕಚೇರಿಯ ವಿಳಾಸವನ್ನು ಸಹ ನಮೂದಿಸಿ)

  • ನೀವು ಪ್ರಥಮ ಮೇಲ್ಮನವಿಯ ನ್ಯಾಯವಿಚಾರಣೆಯ ಸಮಯದಲ್ಲಿ ಉಪಸ್ಥಿತರಿರಲು ಬಯಸುವುದಾದರೆ ನಿಮ್ಮ ಮನವಿಯ ಕೊನೆಯಲ್ಲಿ ನಮೂದಿಸಿ.
  • ಕೇಂದ್ರ ಸರ್ಕಾರದಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಕ್ಕೆ ಪ್ರಥಮ ಮೇಲ್ಮನವಿಗೆ ಶುಲ್ಕವನ್ನು ಗೊತ್ತು ಮಾಡಿಲ್ಲ.
  • ಕೆಲವು ರಾಜ್ಯಗಳು ಪ್ರಥಮ ಮೇಲ್ಮನವಿಗೆ ಶುಲ್ಕ ಮತ್ತು ಒಂದು ನಿರ್ದಿಷ್ಟವಾದ ನಮೂನೆಯನ್ನು ವಿಧಿಸಿವೆ. .
  • ಮನವಿಯಲ್ಲಿ ನಮೂದಿಸಿದ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು "ಪ್ರಮಾಣೀಕರಿಸಿದೆ" ಎಂಬ ಪದದಡಿಯಲ್ಲಿ ಮತ್ತು ಪೂರ್ಣ ಸಹಿಯೊಂದಿಗೆ ಅರ್ಜಿದಾರನಿಂದ ಸ್ವತಹ ಪ್ರಮಾಣೀಕರಿಸಬೇಕು. .
  • ಮನವಿ ಮತ್ತು ಅಂಚೆ ರಸೀದಿ ಮತ್ತು AD ರಸೀದಿಯ ಒಂದು ಪ್ರತಿಯನ್ನು ಉಳಿಸಿ ಕೊಳ್ಳಿ. .
  • ನೀವು ಖುದ್ದಾಗಿ ಸಹ ಒಪ್ಪಿಸಲು ಸಾಧ್ಯ, ಆದರೆ ರಿಜಸ್ಟರ್/ಶೀಘ್ರ ಅಂಚೆಯ ಮೂಲಕ ಕಳುಹಿಸುವುದು ಸೂಕ್ತ. ಕೊರಿಯರ್ ಸೇವೆ ಮೂಲಕ ಕಳುಹಿಸುವುದನ್ನು ತಪ್ಪಿಸಿ. .
  • ಪ್ರಥಮ ಮೇಲ್ಮನವಿ ಪ್ರಾಧಿಕಾರವು ಮನವಿಯನ್ನು ಮೊದಲ ಮನವಿ ಸ್ವೀಕೃತವಾದ ದಿನಾಂಕದಿಂದ 30 ದಿವಸಗಳ ಒಳಗೆ ನಿರ್ಧರಿಸಬೇಕು. ಪ್ರಾಧಿಕಾರವು ವಿಳಂಬಕ್ಕಾಗಿ ಕಾರಣವನ್ನು ಬರೆವಣಿಗೆಯಲ್ಲಿ ನೀಡಿದರೆ, ಅದು ತೀರ್ಪು ನೀಡಲು ಹೆಚ್ಚಿನ 15 ದಿವಸಗಳನ್ನು ತೆಗೆದು ಕೊಳ್ಳ ಬಹುದು( ಒಟ್ಟು 45 ದಿವಸಗಳು). .
  • ಪ್ರಥಮ ಮೇಲ್ಮನವಿ ಪ್ರಾಧಿಕಾರವು "ಅಲಿಖಿತ" ಆದೇಶ ಅಥವಾ ಲಿಖಿತ ಆದೇಶವನ್ನು ನೀಡ ಬಹುದು. .

ಮಾಹಿತಿ ಹಕ್ಕಿನಡಿ ಎರಡನೆ ಮೇಲ್ಮನವಿಯನ್ನು ಹೇಗೆ ದಾಖಲು ಮಾಡುವುದು?

  • ನಿಮ್ಮ ಮನವಿ ಅರ್ಜಿ (ಕೆಳಗೆ ನೀಡಲಾಗಿದೆ), ಪ್ರಗತಿಯ ವಿಷಯಸೂಚಿ ಮತ್ತು ಕಾಲಾನುಕ್ರಮವನ್ನು ಭರ್ತಿ ಮಾಡಿ.
  • ನೀವು ಮೇಲ್ಮನವಿಯನ್ನು ದಾಖಲಿಸುವ ಸಂಧರ್ಭದಲ್ಲಿ 'ದೂರು/ಫಿರ್ಯಾದುದಾರ ' ಪದಗಳನ್ನು ತೆಗೆಯಿರಿ. .
  • ದೂರು ದಾಖಲಿಸುವುದಾದರೆ, "ಎರಡನೆ ಮನವಿ/ಮೇಲ್ಮನವಿದಾರ" ಪದಗಳನ್ನು ಬಳಸಬೇಡಿ. ಜೋಡಿ ಅಂತರಬಿಟ್ಟು ಟೈಪ್ ಮಾಡಿಸಿ. .

ಕೆಳಗಿನ ದಾಖಲೆಗಳ ನಕಲು ಪಡೆಯಿರಿ:

 

  • ಮಾಹಿತಿ ಹಕ್ಕಿನಡಿಯ ಮೂಲ ಅರ್ಜಿಯ ಜೊತೆಗೆ ಅದರ ಇತರೆ ದಾಖಲೆ ಪತ್ರಗಳು
  • ಪ್ರಥಮ ಮೇಲ್ಮನವಿ ಜೊತೆಗೆ ಅದರ ಇತರೆ ದಾಖಲೆ ಪತ್ರಗಳು
  • 10 ರೂಪಾಯಿಗಳ ದಾಖಲಾತಿ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಪಾವತಿಸಲು ಬಳಸಿದ ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್/ಪೇ ಸ್ಲಿಪ್/ ಪೋಸ್ಟಲ್ ಆರ್ಡರ್/ಹಣದ ರಸೀದಿ.
  • ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಶುಲ್ಕದ ಬೇಡಿಕೆ ಪತ್ರದ ಪ್ರತಿ, ಯಾವುದಾದರೂ ಇದ್ದಲ್ಲಿ
  • ಮೂಲ ಅರ್ಜಿ ಮತ್ತು ಪ್ರಥಮ ಮೇಲ್ಮನವಿಯನ್ನು ಅಂಚೆಯ ಮೂಲಕ ಕಳುಹಿಸಿದುದ್ದರ ಅಂಚೆ ಪುರಾವೆ
  • ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರದಿಂದ ಪಡೆದ ಅಂಚೆ AD ಸ್ಲಿಪ್‌ಗಳು/ಅಧಿಕೃತ ಸ್ವೀಕೃತಿ ರಸೀದಿ
  • ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರದ ತೀರ್ಪು, ಯಾವುದಾದರೂ ಪಡೆದಿದ್ದರೆ
  • ವಿಷಯ ಸೂಚಿಯ ಪ್ರಕಾರ ಎಲ್ಲಾ ಕಾಗದ ಪತ್ರಗಳನ್ನು ಜೋಡಿಸಿ ಮತ್ತು ನಂತರ ಅನುಕ್ರಮವಾಗಿ ಎಲ್ಲಾ ಪತ್ರಗಳಿಗೆ ಬಲ ಬದಿಯ ಮೇಲಿನ ಮೂಲೆಯಲ್ಲಿ ಸಂಖ್ಯೆಯನ್ನು ಕೊಡಿ.ಇದು ಎರಡನೆಯ ಮೇಲ್ಮನವಿ/ದೂರಿನ ಒಂದು ಮೂಲ ವಿನ್ಯಾಸ.
  • ಜೆರಾ‌ಕ್ಸ್ ಮೂಲಕ ಮೇಲಿನಂತೆ ಹೆಚ್ಚುವರಿ ನಾಲ್ಕು ಸೆಟ್‌ಗಳನ್ನು ತಯಾರಿಸಿ
  • ಮೇಲ್ಮನವಿ, ವಿಷಯ ಸೂಚಿ ಮತ್ತು ಕಾಲಾನುಕ್ರಮ ಪಟ್ಟಿಯ ಪ್ರತಿಯೊಂದು ಪುಟಕ್ಕೂ ಸಹಿ ಮಾಡಿ [ಎಲ್ಲಾ ಐದು ಸೆಟ್‌ಗಳು]
  • "ಪ್ರಮಾಣೀಕರಿಸಿದೆ" ಎಂಬ ಪದ ಕೆಳಗೆ ಸಹಿ ಮಾಡುವ ಮೂಲಕ ಎಲ್ಲಾ ನಕಲು ಪ್ರತಿಗಳನ್ನು ಸ್ವಯಂ ಪ್ರಮಾಣಿಕರಿಸಿ
  • ಒಂದು ಪ್ರತಿಯನ್ನು ಶೀಘ್ರ/ನೊಂದಾಯಿತ/UPC ಅಂಚೆ ಮೂಲಕ ಪ್ರತಿ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಕಳುಹಿಸಿ ಮತ್ತು ಮೂಲ ಪ್ರತಿಗೆ ಅಂಚೆ ಮೂಲಕ ಕಳುಹಿಸಿದ ಸಾಕ್ಷಿಯ ನಕಲು, ಎರಡನೆ ಮನವಿ/ದೂರಿನ ಹೆಚ್ಚಿನ ಪ್ರತಿ ಮತ್ತು ವಿಷಯಸೂಚಿ/ಕಾಲಾನುಕ್ರಮ ಪಟ್ಟಿಯನ್ನು ಭರ್ತಿಮಾಡಿದ ನಂತರ ನಿಮ್ಮ ಪ್ರತಿಯನ್ನು ಲಗತ್ತಿಸಿ.
  • ಮೂಲ ಪ್ರತಿಯನ್ನು ಅಂಚೆ ಮೂಲಕ ಕಳುಹಿಸಿ ಮತ್ತು ನೋಂದಾಯಿತ AD ಮೂಲಕ ಆಯೋಗಕ್ಕೆ ಒಂದು ಹೆಚ್ಚಿನ ಪ್ರತಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ:
  • ದಿ ರಿಜಿಸ್ಟರ್

    ಸೆಂಟ್ರಲ್ ಇನ್‌ಫಾರ್ಮೆಶನ್ ಕಮಿಷನ್

    II ಫ್ಲೊರ್, ಆಗಸ್ಟ್ ಕ್ರಾಂತಿ ಭವನ್,

    ಭಿಕಾಜಿ ಕಾಮ ಪ್ಲೆಸ್,

    ನ್ಯೂ ದೆಹಲಿ 110066

  • ಕೋರಿಯರ್ ಸೇವೆಯ ಮೂಲಕ ಕಳುಹಿಸುವುದನ್ನು ತಪ್ಪಿಸಿ
  • ಅಂಚೆಯಲ್ಲಿ ಕಳುಹಿಸಿದ ಸಾಕ್ಷಿ ಮತ್ತು ಎರಡನೆ ಮೇಲ್ಮನವಿ/ದೂರು ಪಡೆದಿರುವುದಕ್ಕಾಗಿ ಮುಖ್ಯ ಮಾಹಿತಿ ಆಯೋಗ/ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ/ಪ್ರಥಮ ಮೇಲ್ಮನವಿ ಪ್ರಾಧಿಕಾರದಿಂದ ಸ್ವೀಕರಿಸಿದ AD ಜೊತೆ ಒಂದು ಪ್ರತಿಯನ್ನು ನಿಮ್ಮ ದಾಖಲೆ ಮತ್ತು ಉಲ್ಲೇಖಕ್ಕಾಗಿ ಉಳಿಸಿ ಕೊಳ್ಳಿ
  • ಮುಖ್ಯ ಮಾಹಿತಿ ಆಯೋಗದಿಂದ 15 ದಿವಸಗಳ ಒಳಗೆ ಪೋಸ್ಟಲ್ AD ಕಾರ್ಡ್ ಅಥವಾ ಅಂಗೀಕಾರ ಪತ್ರ ತಲುಪದಿದ್ದಲ್ಲಿ
  • ಅದನ್ನು ಮುಖ್ಯ ಮಾಹಿತಿ ಆಯೋಗದಲ್ಲಿ ಪತ್ತೆ ಹಚ್ಚಲು ಒಂದು ಬೇಡಿಕೆಯ ಜೊತೆಗೆ ಎರಡನೆ ಮೇಲ್ಮನವಿ/ದೂರನ್ನು [ಇತರೆ ದಾಖಲೆ ಪತ್ರಗಳನ್ನು ಬಿಟ್ಟು] ಮಾತ್ರ ನೀವು ಶೀಘ್ರ ಅಂಚೆಯ ಮೂಲಕ ಒಂದು ಪ್ರತಿಯನ್ನು ಕಳುಹಿಸಬಹುದು.ಮುಖ್ಯ ಮಾಹಿತಿ ಆಯೋಗಕ್ಕೆ ನೋಂದಾಯಿತ ಅಂಚೆಯ ರಸೀದಿಯ ನಕಲು ಸಹ ಕಳುಹಿಸಬಹುದು.
  • ನೀವು ಸ್ಥಳೀಯ NGO/ಮಾಹಿತಿ ಹಕ್ಕು ಹೋರಾಟಗಾರರನ್ನು ಪ್ರಥಮ ಅಥವಾ ಎರಡನೆ ಮೇಲ್ಮನವಿಯನ್ನು ದಾಖಲಿಸಲು ಸಂಪರ್ಕಿಸಿ, ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಸಾಮಾನ್ಯವಾಗಿ ಈ ರೀತಿ ಸೇವೆಗಳು ಉಚಿತವಾಗಿರುತ್ತವೆ.

ಒಂದು ಮಾಹಿತಿ ಹಕ್ಕಿನ ಅರ್ಜಿಯನ್ನು ಹೇಹೆ ಸಲ್ಲಿಸುವುದು?

ಮಾಹಿತಿ ಹಕ್ಕಿನ ನಿಮ್ಮ ಅರ್ಜಿಯು ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಸ್ವೀಕೃತವಾಗಿದೆ ಖಚಿತ ಪಡಿಸಿಕೊಳ್ಳಲು, ಮತ್ತು ದಾಖಲಾತಿಯ ಸಾಕ್ಷಿಯನ್ನು ನೀವು ಹೊದಲು ಸಾಧ್ಯವಾಗಿಸುತ್ತದೆ. ಕೆಳಗಿನವು ಒಂದು ಮಾಹಿತಿ ಹಕ್ಕಿನ ಅರ್ಜಿಯನ್ನು ಸಲ್ಲಿಸುವ ಪರೀಕ್ಷಿಸಿದ ಮಾರ್ಗಗಳು:

  • ಖುದ್ದಾಗಿ, ಹಸ್ತಾಂತರಿಸುವುದು: ನಿಮ್ಮ ಅರ್ಜಿಯ ಪ್ರತಿ ಮತ್ತು ಹಣ ಪಾವತಿಯ ಪುರಾವೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಯ ಮೂಲಕ ಅಥವಾ ಒಳಗಿನ ಇಲಾಖೆಯ ಮೂಲಕ ಸರಿಯಾಗಿ ಮೊಹರು ಹಾಕಿದೆ, ಸಹಿ ಮಾಡಿದೆ ಮತ್ತು ದಿನಾಂಕ ಹಾಕಿದೆ ಎಂದು ಖಚಿತ ಪಡಿಸಿಕೊಳ್ಳಿ.
  • ನೋಂದಾಯಿತ ಅಂಚೆ ಅಂಗೀಕಾರ (AD): ಅಂಚೆ ಇಲಾಖೆಯು ನಿಮಗೆ ಹಿಂದುರುಗಿಸಿದ ನಂತರ, AD ಕಾರ್ಡ್ ಸ್ವೀಕೃತಿಯ ಪುರಾವೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. AD ಕಾರ್ಡ್ ಸರಿಯಾದ ಅಂಚೆ ಚೀಟಿ, ಸಹಿ ಮತ್ತು ಸ್ವೀಕೃತ ದಿನಾಂಕದೊಂದಿಗೆ ವಾಪಸ್ಸು ಬರದಿದ್ದ ಸಮಯದಲ್ಲಿ, ಸಂಬಂಧ ಪತ್ತ ಅಂಚೆ ಕಚೇರಿಯೊಂದಿಗೆ ಪೂರ್ಣಗೊಂಡ AD ಕಾರ್ಡ್ನ್ನು ಪಡೆಯಲು ವ್ಯವಹರಿಸಿ.
  • ಶೀಘ್ರ ಅಂಚೆ (ಅಂಚೆ ಇಲಾಖೆಯ ಒಂದು ಸೇವೆ) ಒಮ್ಮೆ ಅರ್ಜಿಯನ್ನು ಶೀಘ್ರ ಅಂಚೆ ಮೂಲಕ ಕಳುಹಿಸಿದರೆ,ಪತೆ  ಹಚ್ಚಿ ಮತ್ತು ತಲುಪಿದ ಸ್ಥಿತಿಗತಿಯ ಪ್ರಿಂಟ್ ಔಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ
  • ಸಾಧಾರಣ ಅಂಚೆ, ಖಾಸಗಿ ಕೊರಿಯರ್ ಕಂಪನಿ ಇತ್ಯಾದಿಗಳನ್ನು ಬಳಸ ಬೇಡಿ. ಅವುಗಳು ನಿಮಗೆ ಖಚಿತವಾದ ತಲುಪಿದ ಪುರಾವೆಯನ್ನು ಒದಗಿಸುವುದಿಲ್ಲ

ಮೂಲ : ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate